ಗೆಳೆಯರೇ, ಬೇರೆ ಎಲ್ಲಾ ವಿಷಯಗಳಿಗಿಂತ ಈಗ ನಮ್ಮ ಮುಂದೆ ಇರುವುದು ಬಹು ಮುಖ್ಯವಾದ ಕೆಲಸ ಇದರ ಬಗ್ಗೆ ಗಮನ ಕೊಡೋಣ ಎಲ್ಲರೂ ನಮ್ಮ ಕರ್ತವ್ಯ ಅಂತ ಕಾರ್ಯಪ್ರವೃತ್ತರಾಗೋಣ. ನಿಮ್ಮ ಸಲಹೆಗಳನ್ನು ವಿನಿಮಯ ಮಾಡಿಕೊಳ್ಳಿ. ಇದೊಂದು ಆಂದೋಲನವಾಗಿ ಮುಂದುವರೆಯಲಿ.
ಭ್ರಷ್ಟಾಚಾರ ಮುಕ್ತ ರಾಜ್ಯ, ಕರ್ನಾಟಕ ರಾಜ್ಯದ ರಾಜಕೀಯದ ಹೊಸ ಶಕೆ ಆರಂಭ. ಶ್ರೀ ಸಂತೋಷ್ ಹೆಗಡೆಯವರ ಸಾರಥ್ಯ.
ಭ್ರಷ್ಟಾಚಾರ ಮುಕ್ತ ರಾಜ್ಯ,
ಕರ್ನಾಟಕ ರಾಜ್ಯದ ರಾಜಕೀಯದ ಹೊಸ ಶಕೆ ಆರಂಭ.
ಶ್ರೀ ಸಂತೋಷ್ ಹೆಗಡೆಯವರ ಸಾರಥ್ಯ.
ಗೆಳೆಯರೇ,
ಇದು ನನ್ನ ಹುಚ್ಚುತನವಲ್ಲ. ನಮ್ಮ ಮುಂದೆ ನಡೆಯುತ್ತಿರುವ ಭ್ರಷ್ಟಾಚಾರಗಳು, ರಾಜಕೀಯ ದೊಬರಾಟಗಳು, ನಮ್ಮ ತೆರಿಗೆ ಹಣದ ದುರುಪಯೋಗ, ಸ್ವಹಿತಕ್ಕಾಗಿ ಇಡೀ ರಾಜ್ಯ, ದೇಶವನ್ನೇ ಬಲಿಕೊಟ್ಟು ಸ್ವಾರ್ಥಕ್ಕೆ ತಮ್ಮತನವನ್ನೇ ಮರೆತಿರುವ ಈ ದಿನಗಳಲ್ಲಿ, ನಮ್ಮ ಮುಂದೆ ಆಶಾಕಿರಣವಾಗಿ ಕಾಣುತ್ತಿರುವವರು ಶ್ರೀ ಸಂತೋಷ್ ಹೆಗಡೆಯವರು, ಅವರ ದಿಟ್ಟತನ, ನೇರ ನುಡಿಯ, ನಿಸ್ವಾರ್ಥ ಸೇವೆಯ ಮನೋಭಾವ ವುಳ್ಳ ಒ ಬ್ಬ ವ್ಯಕ್ಯಿಯನ್ನು ಇಂದು ನಾವು ನಮ್ಮ ಮುಂದೆ ಕಾಣುತ್ತಿದ್ದೇವೆ ಎಂದರೆ ಅದು ಸತ್ಯವಾದುದು. ಅಂತೆ ಕಂತೆಗಳಿಗೆ ಅದು ಮಾಡುತ್ತೇನೆ ಇದು ಮಾಡುತ್ತೇನೆ ಎನ್ನುವುದಕ್ಕಿಂತ ಮಾಡಿ ತೋರಿಸಿ ಸೈ ಎನ್ನಿಕೊಂಡಿರುವ ಪ್ರಾಮಾಣಿಕ ವ್ಯಕ್ತಿ ಶ್ರೀ ಸಂತೋಷ್ ಹೆಗಡೆಯವರು.
ಇಂತಹ ವ್ಯಕ್ತಿಯು ಇದುವರೆಗೂ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಕಾರ್ಯಸಾಧಿಸಿದ್ದಾರೆ. ಇವರನ್ನು ಈ ರಾಜ್ಯದ ಜನರಾದ ನಾವುಗಳು ರಾಜಕೀಯಕ್ಕೆ ಕರೆತರಬೇಕು. ಅವರ ನಾಯಕತ್ವದಲ್ಲಿ, ಒಂದು ರಾಜಕೀಯ ಪಕ್ಷವನ್ನು ಸ್ಥಾಪಿಸಿ, ಯಾವುದೇ ರಾಜಕೀಯ ಪಕ್ಷದ ಸಂಪರ್ಕವಿಲ್ಲದ, ವಿದ್ಯಾವಂತ, ಯುವಕ, ಯುವತಿ, ಸುಸಂಸ್ಕೃತ ನಾಗರೀಕರನ್ನು ನಿಸ್ವಾರ್ಥ ಸೇವೆ ಹಾಗೂ ಸ್ವ ಇಚ್ಚೆಯಿಂದ ಈ ರಾಜ್ಯಕ್ಕೆ ಒಳ್ಳೆಯದು ಮಾಡುವ ಮನೋಭಾವ ಇಟ್ಟುಕೊಂಡಿರುವಂತಹ ವ್ಯಕ್ತಿಗಳನ್ನು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಂದ ಆಹ್ವಾನಿಸಿ, ಅವುಗಳಲ್ಲಿ ಒಂದೊಂದು ಕ್ಷೇತ್ರಗಳಿಗೆ ಒಬ್ಬೊಬ್ಬರನ್ನು ಆಯ್ಕೆ ಮಾಡಿ, ಶ್ರೀ ಸಂತೋಷ್ ಹೆಗಡೆಯವರ ನಾಯಕತ್ವದಲ್ಲಿ ಚುನಾವಣೆಗೆ ನಿಲ್ಲಿಸಬೇಕು. ಜಾತಿ, ಭೇದ, ಧರ್ಮಗಳ ಸೋಂಕಿಲ್ಲದೇ ಸಾಧ್ಯವಾದಷ್ಟು ಜನರನ್ನು ಗೆಲ್ಲಿಸಬೇಕು. ಮುಂದಿನ ಸರ್ಕಾರದಲ್ಲಿ ಶ್ರೀ ಸಂತೋಷ್ ಹೆಗಡೆಯವರು ಮುಖ್ಯಮಂತ್ರಿಗಳಾಗಿ, ಆಯ್ಕೆಯಾದ ಉನ್ನತ ಮನೋಭಾವವುಳ್ಳ ಶಾಸಕರು, ಸಚಿವರ ನೇತೃತ್ವದಲ್ಲಿ ಈ ರಾಜ್ಯವು ರಾಜಕೀಯ ಹೊಸ ಶಕೆಯನ್ನು ಆರಂಭ ಮಾಡಬೇಕು. ಇಷ್ಟು ದಿನ ನಮ್ಮ ರಾಜ್ಯವನ್ನು ಕಾಡುತ್ತಿದ್ದ ರಾಜಕೀಯ ಅಸ್ಥಿರತೆ, ಸ್ವಾರ್ಥ ರಾಜಕಾರಣಕ್ಕೆ ಇತಿಶ್ರೀ ಹಾಡಬೇಕಿದೆ. ರಾಜ್ಯದಲ್ಲಿ ಚುನಾವಣೆ 2 ವರ್ಷದಲ್ಲಿ ಯಾವಾಗಲಾದರೂ ಬರಬಹುದು. ಅದಕ್ಕೆ ಸನ್ನದ್ದರಾಗಬೇಕು.
ನಮ್ಮ "ಪತ್ರಿಕೋದ್ಯಮ" ಮಾಧ್ಯಮಗಳು, ವಿದ್ಯಾರ್ಥಿಗಳು, ಯುವಕರು, ಚಲನಚಿತ್ರನಟರು ಸೇರಿದಂತೆ ಎಲ್ಲಾ ನಾಗರಿಕರು ತಮ್ಮನ್ನು ತಾವು ಸ್ವಯಂಪ್ರೇರಿತರಾಗಿ ತೊಡಗಿಸಿಕೊಳ್ಳಬೇಕು. ಮಾಧ್ಯಮಗಳಲ್ಲಿ ಚರ್ಚೆಗಳು, ಸಂವಾದಗಳು ನಡೆಸಬೇಕು,
ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಬೇಕು.
ನಮ್ಮ ಮುಂದೆ ಇದೊಂದು ಕಡೆಯ ಅವಕಾಶವಿದೆ. ಇದನ್ನು ಬಳಸಿಕೊಳ್ಳಬೇಕು.
ಮಾಧ್ಯಮಗಳು, ಜನರು ಈಗಿರುವ ರಾಜಕೀಯ ಪರಿಸ್ಥಿತಿಯ ಬಗ್ಗೆ ಗಂಟೆಗಟ್ಟಲೇ ಮಾತಾನಾಡುತ್ತೇವೆ. ಟೀಕಿಸುತ್ತೇವೆ. ಅಣಕಿಸುತ್ತೇವೆ. ಅದರ ಜೊತೆಗೆ ಇಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ಶ್ರೀ ಸಂತೋಷ್ ಹೆಗಡೆಯವರನ್ನು ಮನ ಒಲಿಸಬೇಕು. ಅವರನ್ನು ಕರೆತರಬೇಕು ಆ ಕೆಲಸ ಈಗ ಮಾಡಬೇಕಿದೆ.
ನಮ್ಮ ಮನೆಯ, ನಮ್ಮ ರಾಜ್ಯದ ಕೊಳಕನ್ನು ನಾವೇ ಶುದ್ಧಗೊಳಿಸಬೇಕಿದೆ. ಆ ಸಮಯ ಈಗ ಬಂದಿದೆ. ಶ್ರೀ ಸಂತೋಷ್ ಹೆಗಡೆಯವರ ಮನೆ ವಿಳಾಸಕ್ಕೆ 50 ಪೈಸೆ ಪೋಸ್ಟ್ ಕಾರ್ಡನಲ್ಲಿ ರನ್ನು ರಾಜಕೀಯಕ್ಕೆ ಬರುವಂತೆ ವಿನಯಪೂರ್ವಕವಾಗಿ ವಿನಂತಿಸಿಕೊಳ್ಳಿರಿ. ಇದರಲ್ಲಿ ನಿಮ್ಮನ್ನು ನೀವು ಸ್ವಯಂಪ್ರೇರಿತರಾಗಿ ತೊಡಗಿಸಿಕೊಳ್ಳಿ
ಮಾಧ್ಯಮ ಮಿತ್ರರೇ, ಇದರಲ್ಲಿ ನಿಮ್ಮ ಪಾತ್ರ ಬಹಳ ದೊಡ್ಡದು. ಈ ರಾಜ್ಯವನ್ನು ಉಳಿಸುವ, ರಾಜಕೀಯ ಹೊಸ ಶಕೆಯ ಆರಂಭಕ್ಕೆ ಭ್ರಷ್ಟಾಚಾರ ನಿರ್ಮೂಲನೆಗೆ ನಿಮ್ಮ ಸಹಕಾರ, ಶ್ರೀ ಸಂತೋಷ್ ಹೆಗಡೆಯವರ ಮನ ಒಲಿಸುವ ಕಾರ್ಯ, ನಿಮ್ಮ ಮೇಲಿಯೂ ಇದೆ.
ಚುನಾವಣೆಯ ಸಮಯದಲ್ಲಿ ಮತದಾನದ ಮಾಡದೇ ಮನೆಯಲ್ಲಿ ಕುಳಿತು ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಇರುವ ಜನರನ್ನು ಮತಗಟ್ಟೆಗೆ ಬಂದು ಸಂತೋಷ್ ಹೆಗಡೆಯವರ ಪರ ಮತ ಚಲಾಯಿಸುವ ಕೆಲಸವೂ ಆಗಬೇಕಿದೆ
ಈಗಿನಿಂದಲೇ ಇದರ ಬಗ್ಗೆ ಯೋಚಿಸಿ, ಒಂದು ನಿರ್ಧಾರ ಮಾಡಿ.
rajuvinaydavanagere
rajudavanagere@gmail.com
Santhosh hegde
94A, 9th Cross
10th Main, RMV Extn.,
Sadashivanagar
Bangalore-560 080



Mash allah good job keep it up........
ReplyDeletefor corrupt free need not be stand election, if can o.k. but creating awareness,action against corruption forever .it is incremental , continuous fight shoud be there for that we need guidance from santoshji, annaji etc
ReplyDeleterajashekhar hosalli